ಜೀವನ ದರ್ಶನ

ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ ಅವರು ದಿನಾಂಕ 10-05-1940 ರಲ್ಲಿ ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು. 1970 ರಲ್ಲಿ “ಭಾವೈಕ್ಯ ಜನಪದ ಸಂಗೀತ ಮೇಳ” ವನ್ನು ಸ್ಥಾಪಿಸಿ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿದ್ದರು. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು

ಶ್ರೀ ಇಬ್ರಾಹೀಮ ಸುತಾರ ಅವರು ಫೆಬ್ರವರಿ 05, 2022 ರಂದು ಲಕ್ಷಾಂತರ ಅಭಿಮಾನಿಗಳನ್ನು ಬಿಟ್ಟು ಅಗಲಿದರು.

ಜೀವನದುದ್ದಕ್ಕೂ ಅವರು ಸಾರಿದ ಶಾಂತಿ ಸಂದೇಶ ಹಾಗೂ ಆಧ್ಯಾತ್ಮಿಕ ಮಾರ್ಗದಲ್ಲಿ ನಾವೆಲ್ಲರೂ ಮುಂದೆ ಸಾಗೋಣ.

  • ತಂದೆ-ತಾಯಿ: ತಂದೆ ನಬೀಸಾಹೇಬ,  ತಾಯಿ ಆಮೀನಾಬಿ
  • ಜನನ: ೧೦-೦೫-೧೯೪೦ ಬಡಕುಟುಂಬದಲ್ಲಿ
  • ಜನಿಸಿದ ಸ್ಥಳ: ಮಹಾಲಿಂಗಪುರ
  • ಮನೆತನದ ಮೂಲ ಹೆಸರು : ಬಿಸ್ತಿ
  • ಶಿಕ್ಷಣ : ಉರ್ದು ೩ನೇ ತರಗತಿ
  • ತಂದೆಯವರ ಕಾಯಕ : ಬಡಿಗತನ
  • ಬದಲಾದ ಅಡ್ಡ ಹೆಸರು : ಸುತಾರ (ಬಡಿಗೇರ)
  • ರಂಜಾನ್ ಜಾಗರಣಿ ಸಂಘ : ಬಾಲ್ಯ ಸ್ನೇಹಿತರೊಂದಿಗೆ(೧೯೬೦ರಲ್ಲಿ)
  • ಗುರು ದೀಕ್ಷೆ: ಸೂಫಿ ಸಂತರಾದ ಹಜರತ್ ಶೇಖುಲ್ ಮಷಾಯಿಕ ಅಬ್ಭಾಸ್ಅಲಿ ಜುನ್ನೇದಿ ಸಾ|| ಕುಡಚಿ ಇವರೊಂದಿಗೆ
  • ಧರ್ಮ ಪತ್ನಿ : ಮರೇoಬಿ
  • ಮಕ್ಕಳು : ಕೌಸರಬಾನು, ರಿಜವಾನಾ, ಹುಮಾಯೂನ.
  • ಮೂಲ ಕಾಯಕ : ನೇಕಾರಿಕೆ
  • ಪ್ರಭಾವ ಬೀರಿದ ಪದ್ಯ :  ಮಾತು ಮಾತಿಗೆ ಶಂಕರಾ (ಶ್ರೀ ಶಂಕರಾನಂದ ಯೋಗಿ ವಿರಚಿತ ಕೈವಲ್ಯ ನವನೀತ ಗ್ರಂಥ)
  • ಜಿಜ್ಞಾಸೆ :
    • ಎಲ್ಲ ಧರ್ಮ ಗಳ ತತ್ವ ಅರಿಯಬೇಕೆಂಬುವುದು
    • ಎಲ್ಲ ಸಿದ್ಧಾಂತಗಳ ಗುರಿ ಮತ್ತು ಸಾರ ತಿಳಿಯಬೇಕೆಂಬುವುದು
  • ಜೀವನದ ಮಹತ್ವದ ತಿರುವು : ಪ್ರವಚನ ಮತ್ತು ಭಜನೆಯ ಆಯ್ಕೆ
  • ಭಜನೆ ಕಲಿಸಿದವರು :
    • ಶ್ರೀ ಬಸಪ್ಪಣ್ಣ ಹಣಗಿಕಟ್ಟಿ, ಹುಲ್ಯಾಳ
    • ಶ್ರೀ ಗುರುಪಾದಪ್ಪ ಕಕಮರಿ, ಮಹಾಲಿಂಗಪುರ
    • ಶ್ರೀ ಭವರುದ್ದೀನ್ ಪೆಂಡಾರಿ, ಮಹಾಲಿಂಗಪುರ
    • ಶ್ರೀ ಮಲ್ಲಪ್ಪ ಕಲಾದಗಿ, ಮಹಾಲಿಂಗಪುರ
  • ಪ್ರಥಮದಲ್ಲಿ ಭಜನೆ ಪ್ರಾರಂಭಿಸಿದ ಸ್ಥಳ : ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ, ಮಹಾಲಿಂಗಪುರ
  • ಭಜನೆಗೆ ತುಂಬಾ ಪ್ರೋತ್ಸಾಹ ನೀಡಿದವರು :
    • ಶ್ರೀ ಚನ್ನಪ್ಪಣ್ಣ ಕಿರಗಟಗಿ
    • ಶ್ರೀ ಪಾತ್ರೋಟ ಬಂಧುಗಳು
  • ೧೯೭೦ರಲ್ಲಿ : ‘ಶ್ರೀ ಗುರು ಸಾಧು ನಿರಂಜನಾವಧೂತರು ಭಾವೈಕ್ಯ ಜನಪದ ಸಂಗೀತ ಮೇಳ’ ಸ್ಥಾಪನೆ
  • ಸಂವಾದರೂಪ ಭಜನೆಯ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾದವರು : ಶ್ರೀ ಮಲ್ಲಪ್ಪಣ್ಣ ಶಿರೋಳ
  • ವಿನೂತನ ಕಲಾ ಪ್ರಕಾರ : ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆ
  • ನೀಡುವ ಕಾರ್ಯಕ್ರಮಗಳು ಹೆಸರು :
    • ಭಾವೈಕ್ಯ ಭಕ್ತಿ ರಸಮಂಜರಿ
    • ಗೀತ ಸಂವಾದ ತರಂಗಿಣಿ
    • ಆಧ್ಯಾತ್ಮ ಸಂವಾದ ತರಂಗಿಣಿ
  • ಕಾರ್ಯಕ್ರಮದ ವಿಶೇಷತೆ : ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯ ಸಂದೇಶ ಸಾರುವುದು
  • ಮಾತುಗಾರಿಕೆಗೆ  ಸ್ಪೂರ್ತಿ : ಶ್ರೀ ಗುರುಪಾದಪ್ಪ ಕಕಮರಿ
  • ಭಜನಾ ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳು :
    • ಯೋಗಾಸನ ಶಿಬಿರಗಳು
    • ಸಾಕ್ಷರತಾ  ಶಿಬಿರಗಳು
    • ಕುಡಿಯುವ ನೀರಿನ್ ಟ್ಯಾಂಕ್
    • ಬೋರವೆಲ್ ವ್ಯವಸ್ಥೆ
    • ಶಾಲಾ ಕೊಠಡಿಗಳ ನಿರ್ಮಾಣ
    • ಶ್ರೀ ಗುರು ಸಾಧು ನಿರಂಜನಾವಧೂತ ಬ್ರಹ್ಮ ವಿದ್ಯಾಶ್ರಮ
  • ೧೯೮೪ರಲ್ಲಿ : ‘ಶ್ರೀ ಗುರು ಸಾಧು ನಿರಂಜನಾವಧೂತರು ಕಮೀಟಿ ಹಾಗೂ ಭಜನಾ ಮಂಡಳಿ’ ಟ್ರಸ್ಟ್ ಸ್ಥಾಪನೆ
  • ವೇದಾಂತದಲ್ಲಿ ಪ್ರವೃತ್ತಿಗೆ ಕಾರಣರಾದವರು : ಶ್ರೀ ಶಿವಾನಂದ ಸ್ವಾಮಿಗಳು, ರಕ್ಷಿ ಶಿರಗಾಂವ
  • ಶಾಸ್ತ್ರಭ್ಯಾಸ : ಪ್ರಕರಣ ಪ್ರವೀಣ ಶ್ರೀ ಬಸವಾನಂದರ ಬಳಗ ಮಹಾಲಿಂಗಪುರದಲ್ಲಿ
  • ಶಾಸ್ತ್ರಭ್ಯಾಸ ಮಾಡಿಸಿದ ಪೂಜ್ಯರು :
    • ಶ್ರೋ. ಬ್ರ. ಶ್ರೀ ರಾಮಚಂದ್ರ ಶೇಡಜಿ ಶಾಸ್ತ್ರಿಗಳು, ಸಿದ್ಧಾಪೂರ
    • ಶ್ರೋ. ಬ್ರ. ಶ್ರೀ ಸಿದ್ಧಯ್ಯಪ್ಪ ಮಹಾರಾಜರು, ಸೋಲಾಪುರ
    • ಶ್ರೋ. ಬ್ರ. ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
    • ಶ್ರೋ. ಬ್ರ. ಶ್ರೀ ಶಾಂತಾನಂದ ಸ್ವಾಮಿಗಳು, ಮೇರಾಪುರಹಟ್ಟಿ
    • ಶ್ರೋ. ಬ್ರ. ಶ್ರೀ ಸಹಜಾನಂದ ಸ್ವಾಮಿಗಳು, ಮಹಾಲಿಂಗಪುರ
  • ಆಧ್ಯಾತ್ಮಿಕ ವಿಶ್ವವಿದ್ಯಾಲಯ : ಶ್ರೀ ಮಲ್ಲೇಶಪ್ಪ ಕಟಗಿಯವರ ಮನೆ
  • ಆಧ್ಯಾತ್ಮ ಚಿಂತನೆಗೆ ಆಶ್ರಯ ನೀಡಿದವರು :
    • ಶ್ರೀ ಮಲಕಾಜಪ್ಪ ಕಟಗಿ ಮತ್ತು ಶ್ರೀಮತಿ ಭಾಗೀರಥಿ ಮ . ಕಟಗಿ ಶರಣ ದಂಪತಿಗಳು
    • ಶ್ರೀ ಮಹಾಲಿಂಗಪ್ಪಣ್ಣ ಎಂ. ಢಪಳಾಪೂರ
  • ಪ್ರವಚನ ಕ್ಷೇತ್ರಕ್ಕೆ ನೂಕಿದವರು :  ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
  • ಹೊಸ ಪರಿಕಲ್ಪನೆ : ಶ್ರಾವಣಕ್ಕೊಂದು ಸಮಾಜಸೇವೆ
  • ಶ್ರಾವಣಕ್ಕೊಂದು ಸಮಾಜಸೇವೆಗೆ ಪ್ರೇರಣೆ : ವೇದಾಂತ ಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿಜಯಪುರ
  • ಶ್ರಾವಣಕ್ಕೊಂದು ಸಮಾಜಸೇವೆಗಳು :
    • ೧೯೮೮ರಲ್ಲಿ ಶೇಗುಣಸಿ- ತೇರದಾಳ ಮಧ್ಯೆ ೯ ಕಿ.ಮೀ. ಶ್ರಮದಾನದಿಂದ ರಸ್ತೆ ನಿರ್ಮಾಣ
    • ೨೦೦೨ರಲ್ಲಿ ಢವಲೇಶ್ವರಲ್ಲಿ ‘ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆ’ ಯ ನಿರ್ಮಾಣ
    • ೨೦೦೯ರಲ್ಲಿ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ‘ಕಲ್ಯಾಣ ಮಂಟಪ’ ನಿರ್ಮಾಣ
    • ೨೦೧೧ರಲ್ಲಿ ಅರಳಿಮಟ್ಟಿಯಲ್ಲಿ ‘ಶ್ರೀ ಬಸವೇಶ್ವರ ಯಾತ್ರಿ ನಿವಾಸ’
  • ಪುತ್ರನ ವಿವಾಹ ವಿಶೇಷತೆ: ಕಲ್ಯಾಣ ಮಹೋತ್ಸವದ ನಿಮಿತ್ಯ “ಶರಣರ – ಸಂತರ – ಸೂಫಿಗಳ ಭಾವೈಕ್ಯ ಸಂಗಮ ಕಾರ್ಯಕ್ರಮ
  • ಭಾವೈಕ್ಯ ಜನಪದ ಸಂಗೀತ ಮೇಳದ ಪ್ರಸ್ತುತ ಕಲಾವಿದರು:
    • ಶ್ರೀ ಶ್ರೀಮಂತಪ್ಪ ಕಣಬೂರ
    • ಶ್ರೀ ರಾಜೇಸಾಬ ಹಳಿಂಗಳಿ
    • ಶ್ರೀ ಈಶ್ವರಪ್ಪ ಮುಂಡಗನೂರ
    • ಶ್ರೀ ಮೆಹಬೂಬ ಸನದಿ
    • ಶ್ರೀ ಮಹಾದೇವಪ್ಪ ಕರಡಿ
    • ಶ್ರೀ ಶ್ರೀಶೈಲ ಜಕ್ಕಪ್ಪ್ನವರ
    • ಶ್ರೀ ಮಹಾದೇವಪ್ಪ ಕೌಜಲಗಿ
  • ಹೊರರಾಜ್ಯಗಳಲ್ಲಿ ಕಾರ್ಯಕ್ರಮ: ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಒರಿಸ್ಸಾ, ರಾಜಸ್ಥಾನ,ಗೋವಾ
  • ತಾಯಿಯವರ ವಿಯೋಗ : ೧೯-೦೪-೧೯೯೪
  • ತಂದೆಯವರ ವಿಯೋಗ : ೦೫-೦೧-೨೦೦೧
  • ಜೀವನದ ಗುರಿ : ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶ ಸಾರುವುದು

ದೂರದರ್ಶನ ಚಂದನ ವಾಹಿನಿಯ “ಬೆಳಗು” ಕಾರ್ಯಕ್ರಮದಲ್ಲಿ ಶ್ರೀ ಇಬ್ರಾಹೀಮ ಸುತಾರ ಅವರ ಸಂದರ್ಶನ

ಪ್ರವಚನದ ಧ್ವನಿಸುರುಳಿಗಳು


ಶ್ರೀ ಇಬ್ರಾಹೀಮ ಸುತಾರ ಅವರ ಬಹು ಪ್ರಸಿದ್ಧವಾದ ಪ್ರವಚನಗಳ ಧ್ವನಿಸುರುಳಿಗಳು.

ಭಜನೆಯ ಧ್ವನಿಸುರುಳಿಗಳು


ಶ್ರೀ ಇಬ್ರಾಹೀಮ ಸುತಾರ ಅವರ ಬಹು ಪ್ರಸಿದ್ಧವಾದ ಸಂವಾದ ರೂಪ ಭಜನೆಯ ಧ್ವನಿಸುರುಳಿಗಳು.

ದಿ. ಶ್ರೀ ಇಬ್ರಾಹೀಮ ನ. ಸುತಾರ
‘ಭಾವೈಕ್ಯ ನಿಲಯ’ ಮಹಾಲಿಂಗಪುರ- 587312 ತಾ||ಮುಧೋಳ ಜಿ|| ಬಾಗಲಕೋಟ. ಮೊ : 9845282402, 9731828981

All rights reserved. www.ibrahimsutar.com